6 ನೆಯ ತರಗತಿಯ ಅಧ್ಯಾಯ 1: ಇತಿಹಾಸ ಪರಿಚಯ ಪಾಠದ ಪ್ರಶ್ನೋತ್ತರಗಳು
Karnataka 6th Standard Social Science Chapter-01 Introduction to History Complete Question Answers Guide in Kannada
ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದದಿಂದ ಭರ್ತಿ ಮಾಡಿ.
1. ಇತಿಹಾಸದ ಪಿತಾಮಹ:_________.
ಉತ್ತರ: ಹೆರೊಡೋಟಸ್
2. ದಿ ಏಷ್ಯಾಟಿಕ್ ಸೊಸೈಟಿಯನ್ನು ಸ್ಥಾಪಿಸಿದವರು:_______.
ಉತ್ತರ: ಸರ್. ವಿಲಿಯಂಜೋನ್ಸ್
Karnataka 6th Standard Social Science Chapter-01 Introduction to History Complete Question Answers Guide in Kannada 6 ನೆಯ ತರಗತಿಯ ಸಮಾಜ ವಿಜ್ಞಾನ ಅಧ್ಯಾಯ 1: ಇತಿಹಾಸ ಪರಿಚಯ ಪಾಠದ ಪ್ರಶ್ನೋತ್ತರಗಳು
ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಇತಿಹಾಸ ಎಂದರೇನು?
ಉತ್ತರ: ಈ ಹಿಂದೆ ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ ಇತಿಹಾಸ.
2. ಇತಿಹಾಸ ಪಿತಾಮಹ ಯಾರು? ಅವರು ಯಾವ ದೇಶದವರು?
ಉತ್ತರ: 'ಇತಿಹಾಸದ ಪಿತಾಮಹ' ಹೆರೊಡೋಟಸ್, ಗ್ರೀಕ್ ದೇಶದವರು.
3. 'ಆಧಾರವಿಲ್ಲದೆ ಇತಿಹಾಸವಿಲ್ಲ' ಏಕೆ?
ಉತ್ತರ: ಇತಿಹಾಸಕಾರರು ಇತಿಹಾಸವನ್ನು ನಿರ್ದಿಷ್ಟವಾಗಿ ಮತ್ತು ಖಚಿತವಾಗಿ ಹೇಳಲು ಸಾಕ್ಷ್ಯಾಧಾರಗಳನ್ನು ಬಳಸಿಕೊಳ್ಳುತ್ತಾರೆ. ಆದ್ದರಿಂದ 'ಆಧಾರವಿಲ್ಲದೆ ಇತಿಹಾಸವಿಲ್ಲ' ಎಂದು ಹೇಳಲಾಗುವುದು.
4. ಇತಿಹಾಸದ ಆಧಾರಗಳನ್ನು ಪಟ್ಟಿ ಮಾಡಿ.
ಉತ್ತರ: ಇತಿಹಾಸದ ಆಧಾರಗಳನ್ನು ಸಾಹಿತ್ಯ ಆಧಾರಗಳು ಮತ್ತು ಪುರಾತತ್ವ ಆಧಾರಗಳು ಎಂದು ವಿಭಾಗಿಸಲಾಗಿದೆ. ಅವುಗಳೆಂದರೆ ದೇಶಸಾಹಿತ್ಯ, ವಿದೇಶಿಸಾಹಿತ್ಯ, ಲಾವಣಿ, ಜಾನಪದ ಕಥೆಗಳು, ಐತಿಹ್ಯಗಳು ಸ್ಮಾರಕಗಳು, ನಾಣ್ಯಗಳು, ಶಾಸನಗಳು, ಇತರ ಅವಶೇಷಗಳು.
5. ಪುರಾತತ್ವ ಆಧಾರ ಎಂದರೇನು?
ಉತ್ತರ: ಹಿಂದಿನ ಮಾನವರು ನಿರ್ಮಿಸಿದ ಮತ್ತು ಬಳಸಿದ ಭೌತಿಕ ವಸ್ತುಗಳ ಅವಶೇಷಗಳೇ ಪುರಾತತ್ವ ಆಧಾರಗಳು.
6. ಭಾರತೀಯಶಾಸ್ತ್ರವನ್ನು ಕುರಿತು ಅಧ್ಯಯನ ನಡೆಸಿದ ಇತಿಹಾಸಕಾರರನ್ನು ಹೆಸರಿಸಿ.
ಉತ್ತರ: ಭಾರತೀಯ ಶಾಸ್ತ್ರವನ್ನು ಕುರಿತು ಅಧ್ಯಯನ ನಡೆಸಿದ ಇತಿಹಾಸಕಾರರೆಂದರೇ ಸರ್. ವಿಲಿಯಂ ಜೋನ್ಸ್, ಜೇಮ್ಸ್ ಮಿಲ್, ಮ್ಯಾಕ್ಸ್‌ಮುಲ್ಲರ್, ಅಬೆ ಡುಬಾಯ್ಸ್, ಎಲ್ಫಿನ್‌ಸ್ಟನ್, ಕೋಲ್ ಬ್ರೂಕ್, ಕನ್ನಿಂಗ್‌ಹ್ಯಾಮ್, ಇಲಿಯೆಟ್ ಡಾಸನ್.
6 ನೆಯ ತರಗತಿಯ ಸಮಾಜ ವಿಜ್ಞಾನ ಅಧ್ಯಾಯ 1: ಇತಿಹಾಸ ಪರಿಚಯ ಪಾಠದ ಪ್ರಶ್ನೋತ್ತರಗಳು Karnataka 6th Standard Social Science Chapter-01 Introduction to History (Itihasa Parichaya) Complete Question Answers Guide in Kannada
ಗುಂಪಿನಲ್ಲಿ ಚರ್ಚಿಸಿ ಉತ್ತರಿಸಿ.
1. ಅಬೆ ಡುಬಾಯ್ಸ್ ಕುರಿತು ಟಿಪ್ಪಣಿ ಬರೆಯಿರಿ.
ಉತ್ತರ: ಅಬೆ ಡುಬಾಯ್ಸ್ ಎಂಬ ಫ್ರೆಂಚ್ ಮಿಷನರಿ ಶ್ರೀರಂಗಪಟ್ಟಣ ಬಳಿಯ ಗಂಜಾಂಗೆ ಬಂದು ನೆಲೆಸಿದರು. ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಸನ್ಯಾಸಿಯಂತೆ ಬದುಕಿದ ಇವರನ್ನು ಜನರು 'ದೊಡ್ಡಸ್ವಾಮಿಯವರು' ಎಂದು ಕರೆಯುತ್ತಿದ್ದರು. ಇವರು 'ಹಿಂದೂ ಮ್ಯಾನೆರ್, ಕಸ್ಟಮ್ಸ್ ಅಂಡ್ ಸೆರೆಮನಿಸ್' ಎಂಬ ಕೃತಿಯನ್ನು ಬರೆದರು. ಇದರಲ್ಲಿ ಭಾರತೀಯರ ಆಚಾರ, ವಿಚಾರ, ಹಬ್ಬ ಹರಿದಿನ, ವರ್ಣಾಶ್ರಮ ವ್ಯವಸ್ಥೆ ಮೊದಲಾದವುಗಳನ್ನು ಕುರಿತು ಬರೆದಿದ್ದಾರೆ. 24 ವರ್ಷಗಳ ಕಾಲ ಇಲ್ಲಿಯೇ ನೆಲೆಸಿದ್ದ ಅಬೆ ಡುಬಾಯ್ಸ್ ಆನಂತರ ಫ್ರಾನ್ಸಿಗೆ ಹಿಂತಿರುಗಿದರು.
No comments:
Post a Comment